ಇದು (ಶಂಕರ್ ನಾಗ್ ಜನ್ಮ ದಿನ )ನವೆಂಬರ್ 9 , 2014 ರಂದು ಬರೆದದ್ದು :
ಶಂಕರ್-ನಾಗ್ ಎಂದ ತಕ್ಷಣ ನೆನಪಾಗೋದು ಆಟೋರಾಜ ಚಿತ್ರದಲ್ಲಿ ಅವರ “ನಗುವ ಗುಲಾಬಿ ಹೂವೇ” ಹಾಡಿನ ದೃಶ್ಯ. ಆ ಹಾಡಿನಂತೆ ಶಂಕರಣ್ಣ ಕೂಡ ಮುಗಿಲ ಮೇಲೇರಿ, ನಮ್ ಜನಗಳ ಅಭಿಮಾನ ಕಂಡು ಖುಶಿಯಿಂದ ನಗ್ತಾ ಇದಾರೆ ಅನ್ಸುತ್ತೆ. ಅವರ ದೂರದೃಷ್ಟಿಯ ಬಗ್ಗೆ, ಹೊಸತನಕ್ಕೆ ಹಾತೊರೆಯುವ ಮನಸ್ಸಿಗೆ, ಕಲಾ ನೈಪುಣ್ಯತೆಗೆ ಸಾಟಿ ಯಾರೂ ಇಲ್ಲ ಎನಿಸುತ್ತದೆ.
ಅವರಲ್ಲಿ ಕಂಡ ಇನ್ನೊಂದು ಗುಣ ಎಂದರೆ ಕನ್ನಡ ಚಿತ್ರರಂಗದ ಎಲ್ಲ ಪ್ರಮುಖರೊಡನೆ ಸಹನಟರಾಗಿ, ನಿರ್ದೇಶಕರಾಗಿ ಕೆಲಸ ಮಾಡಿದ ರೀತಿ. ಅವರ “ಮಾಲ್ಗುಡಿ ಡೇಸ್” ಧಾರಾವಾಹಿ ನೋಡ್ತಾ ಇದ್ರೆ ನಮ್ಮ ಬಾಲ್ಯದ ನೆನಪುಗಳು ಮರು ಮಾತನಾಡುತ್ತವೆ. ಆ ಧಾರಾವಾಹಿಯ ಪ್ರತಿ ಪಾತ್ರವೂ ನಮಗೆ ಪರಿಚಿತವೇ ಎನಿಸುತ್ತದೆ. ಪಾತ್ರಧಾರಿಗಳಾದವರೂ ಕೂಡ ಕನ್ನಡ ಚಿತ್ರರಂಗದ ಗೊತ್ತಿರುವ ಕಲಾವಿದರೇ. ಡಾ. ವಿಷ್ಣುವರ್ಧನ್, ಗಿರೀಶ್ ಕಾರ್ನಾಡ್, ಗಿರಿಜಾ ಲೋಕೇಶ್, ಅನಂತನಾಗ್, ಬಿ. ಜಯಶ್ರೀ,ಲೋಕನಾಥ್ ಇನ್ನೂ ಹಲವಾರು ಮೇರು ನಟರು ತಮ್ಮ ಇಮೇಜಿಗೆ ಬೆಲೆ ಕೊಡದೇ ಕೇವಲ ಪಾತ್ರ ಪೋಷಣೆಗಾಗಿ ನಟಿಸಿದ್ದಾರೆ , ಆದರೂ ಆ ಸಾಮಾನ್ಯ ಪಾತ್ರಗಳನ್ನು ಜನತೆ ಮರೆಯದ ಹಾಗೆ ಚಿತ್ರಿಸಿದ ಶ್ರೇಯ ಶಂಕ್ರಣ್ಣನಿಗೆ ಸಲ್ಲಬೇಕು. ಅದರಲ್ಲೂ ಸ್ವಾಮಿ ಪಾತ್ರದ ಮಾ. ಮಂಜುನಾಥನ ಅಭಿನಯ ಮನಸ್ಸಿಗೆ ಮುದ ನೀಡುತ್ತದೆ. ಅವನ ಪಾತ್ರ ನೋಡಿದ ಪ್ರತಿಯೊಬ್ಬರೂ ತಾನು ಚಿಕ್ಕವನಿದ್ದಾಗ ಇವನಂತೇ ಇದ್ದೆ ಎಂದು ಒಮ್ಮೆಯಾದರೂ ಅಂದುಕೊಳ್ಳುತ್ತಾರೆ. ಅಂಥ ಕಥಾಮಾಲಿಕೆಯನ್ನು ನಮಗೆ ನೀಡಿದ ಶಂಕ್ರಣ್ಣನಿಗೆ ನನ್ನ ನಮನಗಳು. ನಿನ್ನ ನೆನಪು ನಮ್ಮ ಬಾಳಿಗೆ ದೀಪವಾಗಲಿ.. Once agin ಥ್ಯಾಂಕ್ಯೂ ಶಂಕರಣ್ಣ..

No comments:
Post a Comment