"ಬಾರಿಸು ಕನ್ನಡ ಡಿಂಡಿಮವಾ"...
ನಾನು ಇಲ್ಲಿಯವರೆಗೆ ಕೇಳಿರುವ ಅತ್ಯುತ್ತಮ ಹಾಡುಗಳಲ್ಲಿ ಒಂದು..
ಕೆಲ ಹಾಡುಗಳ ಮೇಕಿಂಗ್ ಅದ್ಭುತವಾಗಿರುತ್ತೆ.. ಕೆಲವು ಅದ್ಭುತ ಸಂಗೀತವನ್ನು ಹೊಂದಿರುತ್ತವೆ..
ಕೆಲವು ಜನರಿಗೆ ಹಾಡಿನ ಸಂಗೀತಕ್ಕಿಂತ ಅದರಲ್ಲಿನ ಸಾಹಿತ್ಯ ಇಷ್ಟವಾಗುತ್ತೆ..

ಆದರೆ ಈ ಹಾಡು ಸ್ವಲ್ಪ ಡಿಫರೆಂಟ್.. ಕುವೆಂಪುರವರು ಬರೆದ, ಎಲ್ಲ ಕನ್ನಡಿಗರಿಗೂ
ಸುಪರಿಚಿತವಾದ ಗೀತೆಯಿದು.. ಆದರೆ ಇದರಲ್ಲಿ ನನಗೆ ಇಷ್ಟವಾಗಿದ್ದು ಯುವಮನಸ್ಸುಗಳಿಗೆ
ತಲುಪುವಂತೆ ಇರುವಂತ ಮೇಕಿಂಗ್.. ಹಾಡಿನ ಮೊದಲ ದೃಶ್ಯದಲ್ಲಿ ಬರುವ ತಮಿಳು , ತೆಲುಗು,
ಹಿಂದಿ, ಇಂಗ್ಲಿಷ್ ಭಾಷಿಗರ ಸಂಭಾಷಣೆಗಳು ಕರ್ನಾಟಕದಲ್ಲಿ ಕನ್ನಡದ ಸಧ್ಯದ
ಪರಿಸ್ಥಿತಿಯನ್ನು ತೊರಿಸುವಂತಿದ್ದರೆ, ಮುಂದೆ ಬರುವ ಹಾಡು ಕರುನಾಡಲ್ಲಿ ಕನ್ನಡದ
ಪಾರುಪತ್ಯ ಇದ್ದೆ ಇರುತ್ತದೆ ಎಂಬ ಸಮಾಧಾನ ಕೊಡುತ್ತದೆ..
ಯಾವುದೇ ಅದ್ಧೂರಿತನ ಬಳಸದೆ, ನೈಜತೆಯಲ್ಲೇ ಮನ ಮುಟ್ಟುವಂತೆ ಚಿತ್ರಿಸಿದ್ದಾರೆ... ಶ್ರೀಮಂತಿಕೆ ಅನ್ನುವದು ಸಾಹಿತ್ಯದಲ್ಲಿ , ಭಾವದಲ್ಲಿ, ಕನ್ನಡ ಅಭಿಮಾನದಲ್ಲಿ ಎಂಬುದು ಸ್ಪಷ್ಟವಾಗುತ್ತದೆ.. ಮಧ್ಯೆ ಬರುವ "ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು" , "ಕನ್ನಡ ಎನೆ ಕುಣಿದಾಡುವುದೆನ್ನೆದೆ,ಕನ್ನಡ ಎನೆ ಕಿವಿ ನಿಮಿರುವದು" ಸಾಲುಗಳು ನಿಮ್ಮೊಳಗಿನ ಕನ್ನಡಿಗನನ್ನು ಬಡಿದೆಬ್ಬಿದುವದು ಸತ್ಯ..
ಇಂತಹ ಅದ್ಭುತವಾದ ದೃಶ್ಯಗೀತೆ ಕೊಟ್ಟ ಕರ್ನಾಟಕ ವಾರ್ತಾ & ಸಂಪರ್ಕ ಇಲಾಖೆಗೆ ಧನ್ಯವಾದ ಹೇಳಬೇಕು.. ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಗೌರವ ಇನ್ನಷ್ಟು ಹೆಚ್ಚಾಯಿತು.. ಇನ್ನೊಬ್ಬ ಶ್ರೇಷ್ಠ ಲೇಖಕನ ಹೆಸರಿರುವ "ಪೂರ್ಣಚಂದ್ರ ತೇಜಸ್ವಿ" ಕನ್ನಡಿಗರ ಹೃದಯದ ತಾಳಕ್ಕೆ ಸರಿಯಾದ ಸಂಗೀತವನ್ನೇ ಸಂಯೋಜಿಸಿದ್ದಾರೆ..
ನನ್ನ ಇಷ್ಟುದ್ದದ ಸ್ಟೇಟಸ್ ಓದುವದನ್ನು ಬಿಟ್ಟು ಒಮ್ಮೆ ಈ ಹಾಡನ್ನು ಕೇಳಿ.. ನೀವು ಗುನುಗುನಿಸ್ತೀರಿ..
https://www.youtube.com/watch?v=m2pLKwlops4
"ಬಾರಿಸು ಕನ್ನಡ ಡಿಂಡಿಮವಾ... ಓ ಕರ್ನಾಟಕ ಹೃದಯ ಶಿವಾ"
#ಕನ್ನಡ